Mysuru Dasara

pressnoteoct13kan1

13th ಅಕ್ಟೋಬರ್, 2021

ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ
ಸಚಿವರಾದ ಎಸ್. ಟಿ. ಸೋಮಶೇಖರ್ ಅವರು ಜಿಲ್ಲಾಡಳಿತ ಸಹಯೋಗದಲ್ಲಿ ಆಯೋಜಿಸಿರುವ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ: 13-10-2021ರಂದು ಮಧ್ಯಾಹ್ನ 03-00 ಗಂಟೆಗೆ ದಸರಾ ಅರಮನೆ ವೇದಿಕೆಯಲ್ಲಿ ನಡೆಯಲಿದೆ.
ಆದಿಚುಂಚನಗಿರಿ ಜಗದ್ಗುರುಗಳಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಕಾರ್ಯಕ್ರಮದ ಸಾನಿಧ್ಯ ವಹಿಸುವರು.
ಶಾಸಕರಾದ ಎಸ್. ಎ. ರಾಮದಾಸ್ ಅಧ್ಯಕ್ಷತೆ‌ ವಹಿಸುವರು. ಸಂಸದರಾದ ಪ್ರತಾಪ್ ಸಿಂಹ ಹಾಗೂ ಇತರ ಗಣ್ಯರು ಭಾಗವಹಿಸುವರು.

ಖ್ಯಾತ ವಾಗ್ಮಿ ಹಾಗೂ ಚಿಂತಕರಾದ ಪ್ರೊ. ಕೃಷ್ಣೇಗೌಡ ಅವರು ಅಭಿನಂದನಾ ನುಡಿ ನುಡಿಯುವರು.