Mysuru Dasara

pressnote-oct9kan

9th ಅಕ್ಟೋಬರ್, 2021

ದೀಪಲಂಕಾರದ ಅವಧಿ ವಿಸ್ತರಣೆ

ಮೈಸೂರು, ಅಕ್ಟೋಬರ್ 9( ಕರ್ನಾಟಕ ವಾರ್ತೆ):- ಮೈಸೂರು ನಗರದ ದಸರಾ ಮಹೋತ್ಸವದಲ್ಲಿ ಸಂಜೆ 6.30 ರಿಂದ 9.30 ರವರೆಗೆ ಇದ್ದ ದೀಪಾಲಂಕಾರವನ್ನು 6.30 ರಿಂದ 10.30 ಗಂಟೆಯವರೆಗೆ ಹಾಗೂ ಅ.14ರ ಆಯುಧಪೂಜೆ ಮತ್ತು 15 ರ ವಿಜಯದಶಮಿ ದಿನದಂದು ಸಂಜೆ 6.30 ರಿಂದ 11:00 ಗಂಟೆವರೆಗೂ ದೀಪಾಲಂಕಾರದ ಸಮಯವನ್ನು ಇಂದಿನಿಂದಲೇ ವಿಸ್ತರಿಸಲಾಗಿದೆ ಎಂದು ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರಿನ ನಗರದಲ್ಲಿ ವಿಶ್ವ ವಿಖ್ಯಾತ ನಾಡಹಬ್ಬ ದಸರಾ- 2021ರ ದೀಪಲಂಕಾರವನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಪ್ರಾಯೋಜಕತ್ವದಲ್ಲಿ ವಿಶಿಷ್ಟ ವ್ಯವಸ್ಥೆ ಗಳ ಮೂಲಕ 102.9 ಕಿ.ಮೀಟರ್ ವಿದ್ಯುತ್ ದೀಪಲಂಕಾರವನ್ನು ಮಾಡಲಾಗಿದೆ. ಈ ಹಿಂದೆ ದಸರಾ ದೀಪಾಲಂಕಾರವನ್ನು ಸಂಜೆ 6:30 ಗಂಟೆಯಿಂದ ರಾತ್ರಿ 8.30 ರವರೆಗೆ ಹಾಕಲಾಗುತ್ತಿತ್ತು. ಆದರೆ ಈ ಬಾರಿ ಜಿಲ್ಲಾಡಳಿತದ ನಿರ್ಧಾರದ ಮೇರೆಗೆ ಸಂಜೆ 6.30 ರಿಂದ 9:30 ರವರಿಗೆ
ದೀಪಾಲಂಕಾರವನ್ನು ನಿಗದಿ ಪಡಿಸಲಾಗಿತ್ತು. ಆದರೆ ಈ ಸಮಯದಲ್ಲಿ ಟ್ರಾಫಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ನಿಗದಿತ ಸಮಯದ ನಂತರವು ಸಹಸ್ರ ಸಂಖ್ಯೆಯಲ್ಲಿ ಜನರು ದೀಪಲಂಕಾರವನ್ನು ನೋಡಲು ಬಯಸುತ್ತಿದ್ದು, ಸಾರ್ವಜನಿಕರು ದೀಪಾಲಂಕಾರದ ಸಮಯವನ್ನು ವಿಸ್ತರಿಸಿ ಎಂದು ಕೇಳಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೀಪಾಲಂಕಾರದ ಅವಧಿಯನ್ನು ವಿಸ್ತರಿಸಲಾಗಿದೆ. ಸಾರ್ವಜನಿಕರು ರಾತ್ರಿ 9:30 ನಂತರವೂ ಟ್ರಾಫಿಕ್ ಸಮಸ್ಯೆಯಾಗದಂತೆ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

https://www.facebook.com/mysorevarthe/