Mysuru Dasara

pressnote-oct65kan

6th ಅಕ್ಟೋಬರ್, 2021

ಅ. 7ರಿಂದ 13ರವರೆಗೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ
ಮೈಸೂರು, ಅಕ್ಟೋಬರ್ 06( ಕರ್ನಾಟಕ ವಾರ್ತೆ):- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2021ರ ಪ್ರಯುಕ್ತ ಅಕ್ಟೋಬರ್ 7 ರಿಂದ 13ರವರೆಗೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಕ್ಟೋಬರ್ 7 ರಂದು ಸಂಜೆ 06.30 ಗಂಟೆಗೆ ಲಕ್ಷ್ಮೀ ವೆಂಕಟೇಶ್ವರ ಜಾನಪದ ಕಲಾ ಸಂಘದ ವತಿಯಿಂದ ಪೂಜಾಕುಣಿತ, ಸಂಜೆ 7:00 ಗಂಟೆಗೆ ಪಂಡಿತ್ ಬಾಲಚಂದ್ರ ನಾಕೋಡ್, ಹುಬ್ಬಳ್ಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ರಾತ್ರಿ 8:00 ಗಂಟೆಗೆ ಬಳ್ಳಾರಿ ವಿದ್ವಾನ್ ಎಸ್.ಕೆ. ಆರ್ ಜಿಲಾನಿ ಭಾಷಾ ಮತ್ತು ತಂಡದಿಂದ ನೃತ್ಯರೂಪಕ ಕಾರ್ಯಕ್ರಮ ನಡೆಯಲಿವೆ.
ಅಕ್ಟೋಬರ್ 8 ರಂದು ಸಂಜೆ 7:00 ಗಂಟೆಗೆ ಮೈಸೂರು ರೇವತಿ ಕಾಮತ್ ಮತ್ತು ತಂಡದಿಂದ ವೀಣಾವಾದನ, ರಾತ್ರಿ 8:00 ಗಂಟೆಗೆ ಕರಾವಳಿ ಯಕ್ಷಗಾನ ಕೇಂದ್ರದ ವತಿಯಿಂದ ಮೈಸೂರು ಜಾಂಬವತಿ ಕಲ್ಯಾಣ ಯಕ್ಷಗಾನ ಕಾರ್ಯಕ್ರಮ ನಡೆಯಲಿವೆ.
ಅಕ್ಟೋಬರ್ 9ರಂದು ಸಂಜೆ 7:00 ಗಂಟೆಗೆ ಮೈಸೂರು ಜಿಲ್ಲೆಯ ವಿವಿಧ ಗಾಯಕರಿಂದ ಸುಗಮ ಸಂಗೀತ, ರಾತ್ರಿ 8:00 ಗಂಟೆಗೆ ಬೆಂಗಳೂರಿನ ಶ್ರೀಧರ್ ಸಾಗರ್ ಮತ್ತು ತಂಡದಿಂದ ಸ್ಯಾಕ್ಸೋಫೋನ್ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 10 ರಂದು ಸಂಜೆ .7:00 ಗಂಟೆಗೆ ಸ್ವರೂಪ್ ಕಲಾ ತಂಡದಿಂದ ಸುಗಮ ಸಂಗೀತ, ರಾತ್ರಿ 8:00 ಗಂಟೆಗೆ ಮಂಡ್ಯದ ಚೇತನ ರಾಧಾ ಕೃಷ್ಣ ಗುರುದೇವ ಅಕಾಡೆಮಿ ಆಫ್ ಫೈನ್‌ಆರ್ಟ್ಸ್ ವತಿಯಿಂದ ನೃತ್ಯರೂಪಕ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 11 ರಂದು ಸಂಜೆ 7:00 ಗಂಟೆಗೆ ನಂಜನಗೂಡಿನ ಸ್ಥಳೀಯ ಕಲಾವಿದರಿಂದ ಸುಗಮ ಸಂಗೀತ, ರಾತ್ರಿ 8:00 ಗಂಟೆಗೆ ಮೈಸೂರು ಆರ್ಟಿಸ್ಟ್ ಅಸೋಸಿಯೇಷನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೈಸೂರು ಲಯತಾಂಡವ ಕಾರ್ಯಕ್ರಮ ನಡೆಯಲಿವೆ.
ಅಕ್ಟೋಬರ್ 12 ರಂದು ಸಂಜೆ 7:00 ಗಂಟೆಗೆ ಮಿಮಿಕ್ರಿ ಗೋಪಾಲ್ ಮತ್ತು ತಂಡ, ನಂಜನಗೂಡಿನ ಹಾಸ್ಯೋತ್ಸವ ರಾತ್ರಿ 8:00 ಗಂಟೆಗೆ ಮೈಸೂರು ಜಿಲ್ಲಾ ವೃತ್ತಿರಂಗ ಭೂಮಿ ಕಲಾವಿದೆಯರ ಸಂಘದಿAದ ಮೈಸೂರು “ಮೋಹಿನಿ ಭಸ್ಮಾಸುರ” ಪೌರಾಣಿಕ ನಾಟಕ
ಅಕ್ಟೋಬರ್ 13 ರಂದು ಸಂಜೆ 7:00 ಗಂಟೆಗೆ ಮೈಸೂರಿನ ವೆಂಕಟೇಶ್ ಮತ್ತು ತಂಡದಿಂದ ಸುಗಮ ಸಂಗೀತ ರಾತ್ರಿ 8:00 ಗಂಟೆಗೆ ಮಂಡ್ಯ, ಮೈಸೂರಿನ ಸುನಿತಾ ಎಸ್ ಚಿದಂಬರ ನಾಟ್ಯ ಶಾಲೆಯಿಂದ ನೃತ್ಯರೂಪಕ ಕಾರ್ಯಕ್ರಮ ನಡೆಯಲಿದೆ.