Mysuru Dasara

pressnote-oct63kan

6th ಅಕ್ಟೋಬರ್, 2021

ಅ. 10ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು
ಮೈಸೂರು, ಅಕ್ಟೋಬರ್ 06( ಕರ್ನಾಟಕ ವಾರ್ತೆ):- ಮೈಸೂರು ದಸರಾ-2021ರ ಪ್ರಯುಕ್ತ ಅರಮನೆ ಆವರಣದಲ್ಲಿ ಅಕ್ಟೋಬರ್ 10 ರಂದು ಬೆಳಗ್ಗೆ 6 ಗಂಟೆಯಿಂದ 5 ಗಂಟೆಯವರೆಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 6 ಗಂಟೆಗೆ ಚಂದ್ರು ಆರ್. ಅಷ್ಟೋತ್ತರ ಶತ ನಾದಸ್ವರ ವಾದನ (108 ಮಂದಿ) ಉದಯರಾಗ, ಬೆಳಗ್ಗೆ 6.45 ಗಂಟೆಗೆ ಮೈಸೂರಿನ ರಾಘವೇಂದ್ರ ರಾಗಾಲಯ ಸಂಗೀತ ಬಳಗದಿಂದ ಜಯ ಚಾಮರಾಜೇಂದ್ರ ಒಡೆಯರ್ ಕೃತಿಗಳ ಗಾಯನ, ಬೆಳಗ್ಗೆ 7.30 ಗಂಟೆಗೆ ಮೈಸೂರಿನ (ಕೃಷ್ಣಪ್ರಸಾದ್) ಬಾಲ ಪ್ರತಿಭೋತ್ಸವದಿಂದ ವಿಶೇಷ ಕಾರ್ಯಕ್ರಮ, ಬೆಳಗ್ಗೆ 8.15 ಗಂಟೆಗೆ ಬಾಗಲಕೋಟೆ ಶ್ರೇಯಾ ಪ್ರಹ್ಲಾದ್ ಕುಲಕರ್ಣಿ ಅವರಿಂದ ಭರತನಾಟ್ಯ, ಬೆಳಗ್ಗೆ 9.00 ಗಂಟೆಗೆ ಶಿವಮೊಗ್ಗದ ದೀಪಿಕಾ ಶ್ರೀಕಾಂತ್ ಮತ್ತು ತಂಡದಿಂದ ಸುಗಮ ಸಂಗೀತ, ಬೆಳಗ್ಗೆ 9.45 ಗಂಟೆಗೆ ಉಡುಪಿಯ ಪೂರ್ಣಿಮಾ ಸುರೇಶ್ ಮತ್ತು ತಂಡದಿಂದ ಏಕ ವ್ಯಕ್ತಿರಂಗ ಪ್ರಯೋಗ, ಬೆಳಗ್ಗೆ 10.30 ಗಂಟೆಗೆ ಬೆಂಗಳೂರು ಚಿನ್ಮಯ ಆತ್ರೇಯಾಸ್ ಅವರಿಂದ ಭಾವಗೀತೆ, ಬೆಳಗ್ಗೆ 11.15 ಗಂಟೆಗೆ ಬೆಂಗಳೂರು ನಟನಂ ಚಾರಿಟಬಲ್ ಟ್ರಸ್ಟ್ನಿಂದ ಭರತನಾಟ್ಯ, ಮಧ್ಯಾಹ್ನ 12.00 ಗಂಟೆಗೆ ಬೆಂಗಳೂರು ದರ್ಶಿನಿ ಮಂಜುನಾಥ್ ಮತ್ತು ತಂಡದಿಂದ ನೃತ್ಯರೂಪಕ, ಮಧ್ಯಾಹ್ನ 12.45 ಗಂಟೆಗೆ ಬೆಂಗಳೂರು ಸಮಯ ಫೌಂಡೇಷನ್ ವತಿಯಿಂದ ಭಕ್ತಿಗೀತೆಗಳು, ಮಧ್ಯಾಹ್ನ 1.30 ಗಂಟೆಗೆ ಮೈಸೂರು ನಾದನರ್ತನಂ ಸಂಗೀತ ಮತ್ತು ನೃತ್ಯ ಶಾಲೆ ವತಿಯಿಂದ ಭಾವ ಸಂಗಮ, ಮಧ್ಯಾಹ್ನ 2.15 ಗಂಟೆಗೆ ಮೈಸೂರು ಸಂಗೀತ ಮತ್ತು ತಂಡದಿಂದ ರಂಗಗೀತೆ, ಮಧ್ಯಾಹ್ನ 3.00 ಗಂಟೆಗೆ ಮೈಸೂರು ಶ್ರೀನಾಥ್ ಮತ್ತು ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಮಧ್ಯಾಹ್ನ 3.45 ಗಂಟೆಗೆ ಮೈಸೂರು ಜಹೀದುಲ್ಲಾ ಖಾನ್ ಮತ್ತು ತಂಡದಿಂದ ಸೂಫಿ ಗಾಯನ, ಸಂಜೆ 4.30 ಗಂಟೆಗೆ ಬೆಂಗಳೂರು ಸವಿಗಾನ ಲಹರಿ ಸುಗಮ ಸಂಗೀತ ತಂಡದಿಂದ ನಾಡಹಬ್ಬದ ಗೀತೆಗಳ ಕಾರ್ಯಕ್ರಮ ನಡೆಯಲಿದೆ.