Mysuru Dasara

9th ಅಕ್ಟೋಬರ್, 2021

ದೀಪಲಂಕಾರದ ಅವಧಿ ವಿಸ್ತರಣೆ

 

ಮೈಸೂರು,
ಅಕ್ಟೋಬರ್
9( ಕರ್ನಾಟಕ
ವಾರ್ತೆ
):- ಮೈಸೂರು ನಗರದ ದಸರಾ ಮಹೋತ್ಸವದಲ್ಲಿ ಸಂಜೆ 6.30 ರಿಂದ 9.30 ರವರೆಗೆ ಇದ್ದ ದೀಪಾಲಂಕಾರವನ್ನು 6.30 ರಿಂದ 10.30 ಗಂಟೆಯವರೆಗೆ ಹಾಗೂ ಅ.14ರ ಆಯುಧಪೂಜೆ ಮತ್ತು 15 ರ ವಿಜಯದಶಮಿ ದಿನದಂದು ಸಂಜೆ 6.30 ರಿಂದ 11:00 ಗಂಟೆವರೆಗೂ ದೀಪಾಲಂಕಾರದ ಸಮಯವನ್ನು ಇಂದಿನಿಂದಲೇ ವಿಸ್ತರಿಸಲಾಗಿದೆ ಎಂದು ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರಿನ
ನಗರದಲ್ಲಿ ವಿಶ್ವ ವಿಖ್ಯಾತ
ನಾಡಹಬ್ಬ ದಸರಾ
– 2021
ದೀಪಲಂಕಾರವನ್ನು ಚಾಮುಂಡೇಶ್ವರಿ
ವಿದ್ಯುತ್ ಸರಬರಾಜು ನಿಗಮ ನಿಯಮಿತದ
ಪ್ರಾಯೋಜಕತ್ವದಲ್ಲಿ ವಿಶಿಷ್ಟ
ವ್ಯವಸ್ಥೆ ಗಳ ಮೂಲಕ
102.9

ಕಿ.ಮೀಟರ್
ವಿದ್ಯುತ್ ದೀಪಲಂಕಾರವನ್ನು
ಮಾಡಲಾಗಿದೆ
.
ಹಿಂದೆ ದಸರಾ ದೀಪಾಲಂಕಾರವನ್ನು
ಸಂಜೆ
6:30 ಗಂಟೆಯಿಂದ
ರಾತ್ರಿ
8.30 ರವರೆಗೆ
ಹಾಕಲಾಗುತ್ತಿತ್ತು
. ಆದರೆ
ಈ ಬಾರಿ ಜಿಲ್ಲಾಡಳಿತದ ನಿರ್ಧಾರದ
ಮೇರೆಗೆ ಸಂಜೆ
6.30 ರಿಂದ
9:30 ರವರಿಗೆ ದೀಪಾಲಂಕಾರವನ್ನು
ನಿಗದಿ ಪಡಿಸಲಾಗಿತ್ತು
.

ಆದರೆ ಈ
ಸಮಯದಲ್ಲಿ ಟ್ರಾಫಿಕ್ ಸಮಸ್ಯೆ
ಕಾಣಿಸಿಕೊಳ್ಳುತ್ತಿದ್ದು
,

ನಿಗದಿತ
ಸಮಯದ ನಂತರವು ಸಹಸ್ರ ಸಂಖ್ಯೆಯಲ್ಲಿ
ಜನರು ದೀಪಲಂಕಾರವನ್ನು ನೋಡಲು
ಬಯಸುತ್ತಿದ್ದು
, ಸಾರ್ವಜನಿಕರು
ದೀಪಾಲಂಕಾರದ ಸಮಯವನ್ನು ವಿಸ್ತರಿಸಿ
ಎಂದು ಕೇಳಿಕೊಳ್ಳುತ್ತಿರುವ
ಹಿನ್ನೆಲೆಯಲ್ಲಿ ದೀಪಾಲಂಕಾರದ
ಅವಧಿಯನ್ನು ವಿಸ್ತರಿಸಲಾಗಿದೆ
.

ಸಾರ್ವಜನಿಕರು
ರಾತ್ರಿ
9:30 ನಂತರವೂ
ಟ್ರಾಫಿಕ್ ಸಮಸ್ಯೆಯಾಗದಂತೆ
ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಬಹುದು
ಎಂದು ಅವರು ತಿಳಿಸಿದ್ದಾರೆ
.ವಿಶ್ವವಿಖ್ಯಾತ
ನಾಡಹಬ್ಬ ಮೈಸೂರು‌ ದಸರಾ
-2021

ರ ಪ್ರಯುಕ್ತ
ಶುಕ್ರವಾರ ಅರಮನೆ ವೇದಿಕೆಯಲ್ಲಿ
ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ
ಹೊಸಹಳ್ಳಿ ವೆಂಕಟರಾಮು ಕೆ
.ಮತ್ತು
ತಂಡದವರು ನಾಡದೇವತೆ ಭುವನೇಶ್ವರಿ
ಕುರಿತಾದ ಮೋಹನ ಕಲ್ಯಾಣಿ ಹಾಗೂ
ಜಯಚಾಮರಾಜೇಂದ್ರ ಅವರು ರಚಿಸಿದ
ಶ್ರೀಕಾಯೋ ಗೌರಿ ಗೀತೆಯ ಸ್ವರ
ನುಡಿಸಿದರು
.