ಮೈಸೂರು ದಸರಾ ಮಹೋತ್ಸವ ಚಲನಚಿತ್ರೋತ್ಸವ ಕಿರುಚಿತ್ರ ಸ್ಫರ್ದೆ
2022 ರ ಮೈಸೂರು ದಸರಾ ಮಹೋತ್ಸವ ಅಂಗವಾಗಿ, ಮೈಸೂರು ದಸರಾ ಚಲನಚಿತ್ರೋತ್ಸವ ನಡೆಯುತ್ತಿದ್ದು, ಇದರ ಭಾಗವಾಗಿ ಕಿರುಚಿತ್ರ ಸ್ಫರ್ಧೆಯನ್ನು ಆಯೋಜಿಸಲಾಗಿದೆ. ವಿವರಗಳು ಈ ಕೆಳಗಿನಂತಿವೆ – 01. ಕಿರುಚಿತ್ರದ ಒಟ್ಟು ಅವಧಿಯು (ಶೀರ್ಷಿಕೆಯೂ ಸೇರಿದಂತೆ) 5 ನಿಮಿಷಗಳಿಗೆ ಮೀರುವಂತಿಲ್ಲ. 02. ಒಬ್ಬರು ಎಷ್ಟು ಬೇಕಾದರೂ ಕಿರುಚಿತ್ರಗಳನ್ನು ಸಲ್ಲಿಸಬಹುದು. 03. ಕಿರುಚಿತ್ರದಲ್ಲಿ ಯಾವುದೇ ಡೌನ್ ಲೋಡ್ ಮಾಡಿದ ಸ್ಥಿರಚಿತ್ರ, ದೃಶ್ಯ, ಹಾಡು ಅಥವಾ ಹಿನ್ನೆಲೆ ಸಂಗೀತ ಉಪಯೋಗಿಸಿದ್ದಲ್ಲಿ, ಅದು ಕೃತಿಚೌರ್ಯ ಅಥವಾ ಕೃತಿಸ್ವಾಮ್ಯ ಸಮಸ್ಯೆಗೆ ಒಳಪಡುವಂತಿದ್ದರೆ, ಅಂಥಹಾ ಕಿರುಚಿತ್ರಗಳನ್ನು ತಿರಸ್ಕರಿಸಲಾಗುವುದು. 04. ಕನ್ನಡೇತರ ಭಾಷಾ ಕಿರುಚಿತ್ರಗಳು ಕಡ್ಡಾಯವಾಗಿ Sub-Titles ಅನ್ನು ಹೊಂದಿರಬೇಕು. 05. https://bit.ly/3QYKoKW ಈ ಲಿಂಕ್ ಅನ್ನು ಕ್ಲಿಕ್ಕಿಸಿದಾಗ ಕಾಣಬರುವ ಗೂಗಲ್ ಅರ್ಜಿನಮೂನೆಯಲ್ಲಿ ಎಲ್ಲಾ ವಿವರಗಳನ್ನೂ ಭರ್ತಿ ಮಾಡಿ, ಅಲ್ಲಿ ನೀಡಲಾಗಿರುವ QR code ಅನ್ನು scan ಮಾಡಿ, ಕಾರ್ಯಾಗಾರದ ಶುಲ್ಕವಾದ ರೂ. 100/- ಪಾವತಿಸಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. 06. ಕಿರುಚಿತ್ರವನ್ನು MP4 ಮಾದರಿಯಲ್ಲಿ ಗೂಗಲ್ ಡ್ರೈವ್ ಅಥವಾ ಯೂ ಟ್ಯೂಬ್ ಗೆ ಅಪ್ ಲೋಡ್ ಮಾಡಿ ಅದರ ಲಿಂಕ್ ಅನ್ನು ಅರ್ಜಿ ನಮೂನೆಯಲ್ಲಿ ನಮೂದಿಸಬೇಕು. 07. ಶ್ರೇಷ್ಠವೆನಿಸುವ 5 ಕಿರುಚಿತ್ರಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು, ಮೈಸೂರು ದಸರಾ ಚಲನಚಿತ್ರೋತ್ಸವದ ಅಂಗವಾಗಿ ಸೆಪ್ಟೆಂಬರ್ 22ರಂದು, ಮೈಸೂರಿನ ವಿಜ್ಞಾನ ಭವನದಲ್ಲಿ ನಡೆಯುವ ಚಲನಚಿತ್ರ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ, ನೀಡಲಾಗುವುದು. ಉಳಿದ ಕಿರುಚಿತ್ರಗಳಿಗೆ ಭಾಗವಹಿಸುವಿಕೆ ಪ್ರಮಾಣ ಪತ್ರವನ್ನು ನೀಡಲಾಗುವುದು. 08. ಕಿರುಚಿತ್ರಗಳ ಸಲ್ಲಿಕೆಗೆ ಸೆಪ್ಟೆಂಬರ್ 12 ಕಡೆಯ ದಿನವಾಗಿರುತ್ತದೆ. 09. ಸ್ಫರ್ಧೆಗೆ ಕಿರುಚಿತ್ರಗಳ ಅನುಮೋದನೆ, ಪ್ರದರ್ಶನ ಎಲ್ಲವೂ ಸಮಿತಿಯ ನಿಯಮಗಳು ಮತ್ತು ಷರತ್ತುಗಳಿಗೆ ಅನ್ವಯವಾಗಿರುತ್ತದೆ. 10. ತೀರ್ಪುಗಾರರ ನಿರ್ಧಾರ ಅಂತಿಮವಾಗಿರುತ್ತದೆ. ಯಾವುದೇ ಚರ್ಚೆಗೆ ಆಸ್ಪದವಿರುವುದಿಲ್ಲ