ಟಿಕೆಟ್ಗಳು ಸೋಲ್ಡ್ ಔಟ್ ಆಗಿದೆ
ಗಮನಿಸಿ : ಯಾವುದೇ ಟಿಕೆಟ್ ಸಂಬಂಧಿತ ಸಮಸ್ಯೆಗಳಿಗೆ ದಯವಿಟ್ಟು support@herowiin.com ಅನ್ನು ಸಂಪರ್ಕಿಸಿ.
ಟಿಕೆಟ್ ಸಂಗ್ರಹ ಕೇಂದ್ರಗಳು :
1) ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಗೋಲ್ಡ್ ಕಾರ್ಡ್‌ಗಳು –
ಸಂಗ್ರಹ ಕೇಂದ್ರ :
ಹೋಟೆಲ್ ಮಯೂರ, KSTDC, ಜೆ . ಎಲ್ . ಬಿ. ರಸ್ತೆ, ಮೈಸೂರು
Date : 5-10-2022ರ ಬೆಳಗ್ಗೆ 10.30 ರವರೆಗೆ ತೆರೆದಿರುತ್ತದೆ .
Timings : 11:00 AM – 5:30 PM
2) ವಿಜಯದಶಮಿ ಮೆರವಣಿಗೆ (ಜಂಬೂಸವಾರಿ) ಟಿಕೆಟ್‌ಗಳು : Rs.1000 , Rs.1500
ಪಂಜಿನ ಕವಾಯತು -Rs.500
ಸಂಗ್ರಹ ಕೇಂದ್ರ :
ಜಿಲ್ಲಾಧಿಕಾರಿಗಳ ಕಾರ್ಯಾಲಯ , ಮೈಸೂರು
ಸ್ಪಂದನ ಸೆಂಟರ್.
Date : 02-10-2022 to 04-10-2022
Timings : 11:00 AM – 5:30 PM
Date : 05-10-2022
Timings : 9:00 AM – 11:00 AM
ಗೋಲ್ಡ್ ಪಾಸ್
ಮೈಸೂರು ದಸರಾ ಮಹೋತ್ಸವ – 2022ರ ಅಂಗವಾಗಿ ದಿನಾಂಕ 5-10-22 ರಂದು ಮೈಸೂರು ನಗರದಲ್ಲಿ ನಡೆಯಲಿರುವ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಹಾಗು ಪಂಜಿನ ಕವಾಯತು ವೀಕ್ಷಿಸಲು ಪ್ರವಾಸಿಗರು ಹಾಗು ಸಾರ್ವಜನಿಕರಿಗೆ ಅನುಕೂಲವಾಗಲೆಂದು ರೂಪಾಯಿ 4999/- ಮುಖಬೆಲೆಯ ಗೋಲ್ಡ್ ಕಾರ್ಡ್ ಗಳನ್ನು ಮೈಸೂರು ದಸರಾ ಅಧೀಕೃತ ಜಾಲತಾಣ ( ವೆಬ್ಸೈಟ್ ) https://mysoredasara.gov.in/ ಮೂಲಕ ಖರೀದಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿರುತ್ತದೆ
ಆನ್ಲೈನ್ ಮೂಲಕ ದಸರಾ ಗೋಲ್ಡ್ ಕಾರ್ಡ್ (Gold Card) ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿ , ರೂ 4999/- ಮುಖಬೆಲೆಯ ಗೋಲ್ಡ್ ಕಾರ್ಡ್ ಗಳನ್ನು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಕೆಲವು ಟ್ರಾವೆಲ್ ಏಜನ್ಸಿಯವರು ಮಾರಾಟ ಮಾಡುತಿರುವುದು ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿರುತದೆ . ಈ ಸಂಭಂದ ಈಗಾಗಲೇ ಕಾನೂನು ಕ್ರಮ ವಹಿಸಲಿದ್ದು , ಸಾರ್ವಜನಿಕರು ದಸರಾ ಅಧೀಕೃತ ಜಾಲತಾಣ https://mysoredasara.gov.in/ ಮೂಲಕವೇ ದಸರಾ ಗೋಲ್ಡ್ ಕಾರ್ಡ್ ಗಳನ್ನು ಖರೀದಿಸುವಂತೆ ಕೋರಲಾಗಿದೆ . ಹಾಗು ದಸರಾ ಮಹೋತ್ಸವ – 2022 ರ ಜಂಬೂ ಸವಾರಿ ಹಾಗು ಪಂಜಿನ ಕವಾಯತು ವೀಕ್ಷಣೆಗೆ ಟಿಕೆಟ್ ಗಳನ್ನು ಸಹ ಅಧಿಕೃತವಾಗಿ ಮೈಸೂರು ದಸರಾ ಜಾಲತಾಣದ ಮೂಲಕವೇ ಖರೀದಿಸಲು ದಿನಾಂಕ : 30-09-22 ರಿಂದ ಅವಕಾಶ ಕಲ್ಪಿಸಲಾಗುವುದು . ಈ ಮೇರೆಗೆ ಅನಧೀಕೃತ ವ್ಯಕ್ತಿ / ಸಂಸ್ಥೆಗಳಿಂದ ಕಾಳಸಂತೆಯಲ್ಲಿ ದಸರಾ ಟಿಕೆಟ್ ಗೋಲ್ಡ್ ಕಾರ್ಡ್ ಗಳನ್ನು ಖರೀದಿಸದಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ