ಮೈಸೂರು ದಸರಾ ಮಹೋತ್ಸವ ಚಲನಚಿತ್ರೋತ್ಸವ ಚಲನಚಿತ್ರ ನಿರ್ಮಾಣ ಕಾರ್ಯಾಗಾರ
೨೦೨೨ ರ ಮೈಸೂರು ದಸರಾ ಮಹೋತ್ಸವ ಅಂಗವಾಗಿ, ಮೈಸೂರು ದಸರಾ ಚಲನಚಿತ್ರೋತ್ಸವ ನಡೆಯುತ್ತಿದ್ದು, ಇದರ ಭಾಗವಾಗಿ ಸೆಪ್ಟೆಂಬರ್ ೨೨ ರಿಂದ ೨೪ ರವರೆಗೆ ೩ ದಿನಗಳ ಕಾಲ “ಚಿತ್ರ ನಿರ್ಮಾಣ – ಪೂರ್ವ ತಯಾರಿ” ಕುರಿತಂತೆ ಚಲನಚಿತ್ರ ಕಾರ್ಯಾಗಾರವನ್ನು ನಡೆಸಲು ಉದ್ದೇಶಿಸಲಾಗಿದೆ. ಕನ್ನಡ ಚಲನಚಿತ್ರ ರಂಗದ ಅನುಭವೀ,ಹೆಸರಾಂತ ನಿರ್ದೇಶಕರುಗಳು, ಕಾರ್ಯಾಗಾರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ವಿಷಯಾಧಾರಿತ ಮಾಹಿತಿಯ ತರಗತಿಗಳನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಾಗಾರವು ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ವಿಜ್ಞಾನ ಭವನದಲ್ಲಿ ನಡೆಯಲಿದೆ. ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ, ಸೆಪ್ಟೆಂಬರ್ ೨೭ ರಿಂದ ಅಕ್ಟೋಬರ್ ೩ ರವರೆಗೆ ಐನಾಕ್ಸ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ಮೂರು ಪರದೆಗಳಲ್ಲಿ ದಸರಾ ಚಲನಚಿತ್ರೋತ್ಸವದ ಅಂಗವಾಗಿ ಪ್ರದರ್ಶಿಸಲ್ಪಡುವ ಚಲನಚಿತ್ರಗಳನ್ನು ವೀಕ್ಷಿಸಲು, ಶೇಕಡಾ ೫೦ರ ದರದಲ್ಲಿ ಪಾಸ್ ಗಳನ್ನು ನೀಡಲಾಗುವುದು. ಕಾರ್ಯಾಗಾರದ ಸಮಾರೋಪ ಸಮಾರಂಭದ ನಂತರ ಭಾಗವಹಿಸುವಿಕೆಯ ಪ್ರಮಾಣ ಪತ್ರವನ್ನು ನೀಡಲಾಗುವುದು. ಕಾರ್ಯಾಗಾರದಲ್ಲಿ ಭಾಗವಹಿಸಬಯಸುವವರು https://bit.ly/3dxD22D ಈ ಲಿಂಕ್ ಅನ್ನು ಕ್ಲಿಕ್ಕಿಸಿದಾಗ ಕಾಣಬರುವ ಗೂಗಲ್ ಅರ್ಜಿನಮೂನೆಯಲ್ಲಿ ಎಲ್ಲಾ ವಿವರಗಳನ್ನೂ ಭರ್ತಿ ಮಾಡಿ, ಅಲ್ಲಿ ನೀಡಲಾಗಿರುವ QR code ಅನ್ನು scan ಮಾಡಿ, ಕಾರ್ಯಾಗಾರದ ಶುಲ್ಕವಾದ ರೂ. ೩೦೦/- ಪಾವತಿಸಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಕಾರ್ಯಾಗಾರಕ್ಕೆ ಹೆಸರನ್ನು ನೋಂದಾಯಿಸಿಕೊಳ್ಳಲು ಸೆಪ್ಟೆಂಬರ್ ೧೯ ಕಡೆಯ ದಿನವಾಗಿರುತ್ತದೆ. ಮೊದಲು ನೋಂದಾವಣೆ ಮಾಡುವ ೨೦೦ ಶಿಬಿರಾರ್ಥಿಗಳಿಗೆ ಮಾತ್ರ ಕಾರ್ಯಾಗಾರದಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ಸಮಿತಿಯ ನಿಯಮಗಳು ಮತ್ತು ಷರತ್ತುಗಳಿಗೆ ಶಿಬಿರಾರ್ಥಿಗಳು ಬದ್ಧರಾಗಿರಬೇಕು. ಸಮಿತಿಯ ನಿರ್ಧಾರ ಅಂತಿಮವಾಗಿರುತ್ತದೆ.