About Mysoredasara -kannada

ಮೈಸೂರು ದಸರಾ

ಸಾಂಸ್ಕೃತಿಕ ನಗರಿ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ ಎಂದರೇ, ಅಂದಚಂದದ ಮೈಸೂರನ್ನ ನೋಡಲು ಜನರು ಉತ್ಸುಕರಾಗಿದ್ದಾರೆ ಎಂದರೇ, ಅಲ್ಲಿ ಕೇಳಲು ಇತಿಹಾಸ ಮತ್ತು ಪುರಾಣದ ಕಥೆಗಳು ಇವೆ ಎಂದರೇ, ನಾನಾ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೂ ಜರುಗಲಿವೆ ಎಂದರೇ ನಾಡಹಬ್ಬ ಮೈಸೂರು ದಸರಾ ಬಂತು ಎಂದೇ ಅರ್ಥ. “ಮೈಸೂರು ದಸರಾ ಎಷ್ಟೊಂದು ಸುಂದರ ಚೆಲ್ಲಿದೆ ನಗೆಯ ಪನ್ನೀರ” ಎಂಬ ಸಾಹಿತ್ಯದ ಸಾಲಿನಂತೆ ಸುಂದರ ದಸರಾ ಮತ್ತೆ ಬರುತ್ತಿದೆ. ವಿಶ್ವವಿಖ್ಯಾತ ಮೈಸೂರು ದಸರಾ ತಮ್ಮೆಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುತ್ತಿದೆ.

DSC_5078

ಕಳೆದ ಎರಡ್ಮೂರು ವರ್ಷ ಕೊರೊನಾ ಕರಿ‌ನೆರಳಿನಿಂದ ಸರಳ ದಸರಾ ಮಾಡುವಂತಾಗಿತ್ತು. ಇದೀಗ ಕೊರೊನಾ ಅಲೆ ಗಣನೀಯವಾಗಿ ಕಮ್ಮಿಯಾಗಿದ್ದು, ಈ ಬಾರಿಯ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ನಾಡಹಬ್ಬ ಮೈಸೂರು ದಸರಾ ಉತ್ಸವ ಕರ್ನಾಟಕ ಸರ್ಕಾರ ನಡೆಸುತ್ತಿರುವ ಅತಿ ದೊಡ್ಡ ಮತ್ತು ಪ್ರಮುಖ ಉತ್ಸವವಾಗಿದೆ. 2022ನೇ ಸಾಲಿನ ಮೈಸೂರು ದಸರಾ ಮಹೋತ್ಸವವು ಸೆಪ್ಟೆಂಬರ್ 26ರ ಬೆಳಗ್ಗೆ 9:45 ರಿಂದ 10.05ರವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಪ್ರಾರಂಭಗೊಂಡು ಅಕ್ಟೋಬರ್ 5ರ ಮಧ್ಯಾಹ್ನ 2.36 ರಿಂದ 2.50ಕ್ಕೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜ ಪೂಜೆ ನೆರವೇರಿದ ಬಳಿಕ ವಿಜಯದಶಮಿಯ ಜಂಬೂಸವಾರಿ ಮೆರವಣಿಗೆಯೊಂದಿಗೆ ಅಂತ್ಯಗೊಳ್ಳುತ್ತದೆ.

ನೂರಾರು ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ದಸರಾ ಮಹೋತ್ಸವ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೇ ಅದು ನಾಡಹಬ್ಬ ಎನಿಸಿಕೊಂಡಿದೆ. ಇಲ್ಲಿ ಯಾವುದೇ ಜಾತಿ-ಧರ್ಮ-ಮತಗಳ ಭೇದಭಾವ ಇಲ್ಲ. ಎಲ್ಲರೂ ಪಾಲ್ಗೊಂಡು ಎಲ್ಲರೂ ಸಂತಸಗೊಳ್ಳುವ ಖುಷಿಯ ನೀಡಿ ಖುಷಿಯ ಹಂಚುವ ಹಬ್ಬವಾಗಿದೆ‌.

DSC_1793

DSC_4231

ನವರಾತ್ರಿಯ ಆ 9 ದಿನವೂ ನಾನಾ ಕಾರ್ಯಕ್ರಮಗಳು ಜರುಗುತ್ತವೆ. ನವರಾತ್ರಿಯಲ್ಲಿ ಮೈಸೂರು ಸಿಂಗಾರಗೊಳ್ಳುವುದನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ. ವಿದ್ಯುತ್ ದೀಪಾಲಂಕಾರ ಎಲ್ಲರನ್ನೂ ಸೆಳೆಯುತ್ತದೆ. ಮನೆಮನೆಗಳಲ್ಲಿ ಬೊಂಬೆ ಕೂರಿಸುವುದು, ಸರಸ್ವತಿ ಪೂಜೆ, ಆಯುಧ ಪೂಜೆ, ದುರ್ಗಾ ಪೂಜೆ ಕೈಗೊಳ್ಳುವುದು ನವರಾತ್ರಿಯ ವಿಶೇಷ. ಜೊತೆಗೆ ಸರ್ಕಾರದ ವತಿಯಿಂದ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತವೆ. ಆಹಾರ ಮೇಳ, ಪುಷ್ಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ರೈತ ದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ಕವಿಗೋಷ್ಠಿ ಹೀಗೆ ಹತ್ತಾರು ಕಾರ್ಯಕ್ರಮಗಳು ಜನರನ್ನು ಆಕರ್ಷಿಸುತ್ತವೆ.

DSC_0165

ಮೈಸೂರು ಅಂಬಾವಿಲಾಸ ಅರಮನೆಯಲ್ಲಿಯೂ ವಿಶೇಷ ಪೂಜೆಗಳು ನಡೆಯುತ್ತವೆ. ಮೈಸೂರು ರಾಜವಂಶಸ್ಥರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ದರ್ಬಾರ್ ನಡೆಸುತ್ತಾರೆ. ಅದಕ್ಕಾಗಿಯೇ ವಿಶೇಷವಾಗಿ ಸಿಂಹಾಸನ ಜೋಡಣೆಯನ್ನೂ ಮಾಡಲಾಗುತ್ತದೆ. ಅರಮನೆಯಲ್ಲಿಯೂ ವಿಶೇಷವಾಗಿ ಸರಸ್ವತಿ ಪೂಜೆ, ಆಯುಧ ಪೂಜೆ, ಬನ್ನಿ ಮರದ ಪೂಜೆಗಳನ್ನು ನೆರವೇರಿಸಲಾಗುತ್ತದೆ.

DSC_3983

ನವರಾತ್ರಿಯ ಕಡೆಯ ದಿನವಾದ ವಿಜಯದಶಮಿಯಂದು ಮೈಸೂರಿನಲ್ಲಿ ನಡೆಯುವ ಜಂಬೂಸವಾರಿ ಬಗ್ಗೆ ಮಾತಿನಲ್ಲಿ ಹೇಳಲು ಸಾಧ್ಯವೇ ಇಲ್ಲ. ಆ ವೈಭವ, ಆ ವಿಜೃಂಭಣೆ, ಆ ಅದ್ಭುತ ವಿಶ್ವವಿಖ್ಯಾತಿ ಗಳಿಸಿದೆ.

ಜಂಬೂಸವಾರಿ ಮೆರವಣಿಗೆ ನೋಡಲು ದೇಶದ ಮೂಲೆಮೂಲೆಯಿಂದಲೂ ವಿದೇಶಗಳಿಂದಲೂ ಜನರು ಆಗಮಿಸುತ್ತಾರೆ. ಹೇಳಿಕೇಳಿ ಮೈಸೂರು ಪ್ರವಾಸಿಗರ ನೆಚ್ಚಿನ‌ ತಾಣ. ಇನ್ನೂ ದಸರಾ ಸಮಯದಲ್ಲಿ ಕೇಳಬೇಕೇ? ಮೈಸೂರು ದಸರಾ ಎಂದರೇ ಸೊಗಸಾದ ಸೆಳೆತ. ದಸರಾ ವೈಭವವನ್ನು ಹೆಚ್ಚು ಜನರಿಗೆ ತಾವು ಇರುವಲ್ಲಿಯೇ ವೀಕ್ಷಿಸಲು ಅನುಕೂಲವಾಗುವಂತೆ ಎಲ್ಲಾ ಕಾರ್ಯಕ್ರಮಗಳನ್ನು ವೆಬ್‌ಸೈಟ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ನೇರ ಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗಿದೆ

DSC_0168

DSC_3804

ವಿಜಯ ದಶಮಿಯಂದು ಚಿನ್ನದ ಅಂಬಾರಿಯಲ್ಲಿ ನಾಡದೇವಿ ಚಾಮುಂಡಿಯ ಉತ್ಸವ ಮೂರ್ತಿ ಹೊತ್ತು ಸಾಗಲು ಕ್ಯಾಪ್ಟನ್ ಅಭಿಮನ್ಯು ಸಿದ್ಧಗೊಳ್ತಿದ್ದಾನೆ. ದಸರಾ ಆನೆಗಳಿಗೆ ತಾಲೀಮು ಭರದಿಂದ ಸಾಗಿದೆ. ವಿಜಯದಶಮಿಯಂದು ದಸರಾ ಆನೆಗಳಿಗೆ ಮಾಡಲಾಗುವ ಅಲಂಕಾರವೂ ಆಕರ್ಷಕವಾಗಿರುತ್ತದೆ‌.

ಹಾಗೆ ಅಂಬಾರಿ ಜೋಡಣೆ, ವಜ್ರಮುಷ್ಠಿ ಕಾಳಗ, ನಂದಿ ಧ್ವಜ ಪೂಜೆ, ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳು, ಸಾಂಸ್ಕೃತಿಕ ವೇಷಭೂಷಣಗಳು, ಪಂಜಿನ ಕವಾಯತು ಅಬ್ಬಾ! ಮೈಸೂರು ದಸರಾ ಅಂದರೆ ಅಲ್ಲಿ ಸ್ವರ್ಗವೇ ಧರೆಗಿಳಿದಂತೆ.

DSC_3983
DSC_3983

ಹಾಗೆ ಅಂಬಾರಿ ಜೋಡಣೆ, ವಜ್ರಮುಷ್ಠಿ ಕಾಳಗ, ನಂದಿ ಧ್ವಜ ಪೂಜೆ, ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳು, ಸಾಂಸ್ಕೃತಿಕ ವೇಷಭೂಷಣಗಳು, ಪಂಜಿನ ಕವಾಯತು ಅಬ್ಬಾ! ಮೈಸೂರು ದಸರಾ ಅಂದರೆ ಅಲ್ಲಿ ಸ್ವರ್ಗವೇ ಧರೆಗಿಳಿದಂತೆ.