ಸ್ಯಾಂಡಲ್ ವುಡ್ ನೈಟ್ ಬಿತ್ತಿಪತ್ರ ವಿತರಣೆ

ಸ್ಯಾಂಡಲ್ ವುಡ್ ನೈಟ್ ಬಿತ್ತಿಪತ್ರ ವಿತರಣೆ

ಮೈಸೂರು,ಸೆ.29(ಕರ್ನಾಟಕ ವಾರ್ತೆ) : ನಾಡ ಹಬ್ಬ ದಸರಾದ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿರುವ ಯುವ ದಸರಾದ ಸೆ.30.ರ ಸ್ಯಾಂಡಲ್ ವುಡ್ ನೈಟ್ ವಿಶೇಷ ಕಾರ್ಯಕ್ರಮದ ಬಿತ್ತಿಪತ್ರವನ್ನು ಯುವ ದಸರಾ ಉಪಸಮಿತಿ ವಿಶೇಷಾಧಿಕಾರಿಯಾಗಿರುವ ಎಸ್ಪಿ ಆರ್.ಚೇತನ್ ಅವರು ಬಿಡುಗಡೆಗೊಳಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸ್ಯಾಂಡಲ್ ವುಡ್ ನೈಟ್ಸ್ ವಿಶೇಷ ಆಹ್ವಾನಿತರಾಗಿ ನಟರಾದ ಉಪೇಂದ್ರ, ಅಭಿಷೇಕ್ ಅಂಬರೀಶ್,ರಿಷಬ್ ಶೆಟ್ಟಿ,ಪ್ರಮೋದ್ ಶೆಟ್ಟಿ,ಪ್ರಜ್ವಲ್ ದೇವರಾಜ್, ಚಿಕ್ಕಣ್ಣ,ಧನ್ವೀರ್ ಗೌಡ,ನಟಿ ಸಪ್ತಮಿ ಗೌಡ ಆಗಮಿಸಲಿದ್ದಾರೆ ಎಂದರು.

ಸಂಗೀತ ಕಾರ್ಯಕ್ರಮವನ್ನು ಸಾಧು ಕೋಕಿಲ ಅವರು ನಡೆಸಲಿದ್ದು, ನಟ ದೀರನ್ ರಾಮ್, ನಟಿಯರಾದ ನಿಧಿ ಸುಬ್ಬಯ್ಯ,ಕೃಷಿ ತಪಂಡ,ಸೋನುಗೌಡ,ಹರ್ಷಿಕ ಪೂಣಚ್ವ ಅವರು ವಿಶೇಷ ಪ್ರದರ್ಶನ ನೀಡಲಿದ್ದಾರೆ.

ನಟಿಯರಾದ ನಿಶ್ವಿಕ,ಮಿಲನ ನಾಗರಾಜ್,ಅಮೃತ ಅಯ್ಯಂಗಾರ್, ಮಾನ್ವಿತ ಹರೀಶ್, ಕಾರುಣ್ಯ ರಾಮ್, ನಟ ಡಾರ್ಲಿಂಗ್ ಕೃಷ್ಣ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಅಲೋಕ್ ಬಾಬು ಅವರಿಂದ ಸಂಗೀತ ಕಚೇರಿ ನಡೆಯಲಿದೆ ಎಂದು ಮಾಹಿತಿ ನೀಡಿದರು.