ಸೆ. 28 ರಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಂದ ಬೆಟ್ಟದ ಹೂ ಚಿತ್ರ ವೀಕ್ಷಣೆ
ಮೈಸೂರು, ಸೆ.26 (ಕರ್ನಾಟಕ ವಾರ್ತೆ):- ಮೈಸೂರು ದಸರಾ-2022 ಹಾಗೂ ಚಲನಚಿತ್ರೋತ್ಸವ ಉಪಸಮಿತಿ ವತಿಯಿಂದ ಆಯೋಜಿಸಲಾಗಿರುವ ಅಪ್ಪು ದಿನದ ಅಂಗವಾಗಿ ಡಾ. ಪುನೀತ್ ರಾಜಕುಮಾರ್ ಅವರು ಬಾಲ ನಟರಾಗಿ ನಟಿಸಿರುವ ಬೆಟ್ಟದ ಹೂ ಚಿತ್ರವನ್ನು ಸೆಪ್ಟೆಂಬರ್ 28 ರಂದು ಬೆಳಗ್ಗೆ 9.30 ಗಂಟೆಗೆ ಶಕ್ತಿದಾಮ ಮಕ್ಕಳೊಂದಿಗೆ ಡಾ.ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ವೀಕ್ಷಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
