ಸಚಿವ ಎಸ್.ಟಿ.ಸೋಮಶೇಖರ್ ರವರಿಂದ ಟಾಂಗಾ ಸವಾರಿ

ಸಚಿವ ಎಸ್.ಟಿ.ಸೋಮಶೇಖರ್ ರವರಿಂದ ಟಾಂಗಾ ಸವಾರಿ


ಮೈಸೂರು, ಸೆಪ್ಟೆಂಬರ್ 29, ಗುರುವಾರ

ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ‌.ಸೋಮಶೇಖರ್ ಅವರು ಟಾಂಗಾದಲ್ಲಿ ಸವಾರಿ ಮಾಡಿ ದೀಪಾಲಂಕಾರ ವೀಕ್ಷಣೆ ಮಾಡಿದರು.

ಸರ್ಕಾರಿ ಅತಿಥಿ ಗೃಹದಿಂದ ಹೇಮಚಂದ್ರ ಸರ್ಕಲ್, ಜಯಚಾಮರಾಜೇಂದ್ರ ಒಡೆಯರ್, ಸರ್ಕಲ್‌, ನಾಲ್ವಡಿ ಕೃಷ್ಣರಾಜ ಒಡೆಯರ್ ಸರ್ಕಲ್, ಕೆ.ಆರ್.ಸರ್ಕಲ್, ವಿಶ್ವೇಶ್ವರಯ್ಯ ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಪೋಸ್ಟ್ ಆಫೀಸ್ ಸರ್ಕಲ್ ಮಾರ್ಗದಲ್ಲಿ ತೆರಳಿದರು.

ದಸರಾ ವೀಕ್ಷಣೆಗೆ ದೇಶ ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈ ಬಾರಿ ಅದ್ದೂರಿ ದೀಪಾಲಂಕಾರ ಮಾಡಲಾಗಿದೆ. ಟಾಂಗಾದಲ್ಲಿ ಸವಾರಿ ಮಾಡಿ ದೀಪಾಲಂಕಾರ ವೀಕ್ಷಣೆ ಮಾಡುವುದರಿಂದ ದೀಪದ ಬೆಳಕಿನ ಸೊಬಗನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಟಾಂಗಾ ಸವಾರಿಗೂ ಉತ್ತೇಜನ ನೀಡಿದಂತಾಗುತ್ತದೆ ಎಂಬ ಉದ್ದೇಶದಿಂದ ಟಾಂಗಾ ಸವಾರಿ ಮಾಡಲಾಯಿತು ಎಂದು ಸಚಿವರು ಹೇಳಿದರು.

ಟಾಂಗಾ ಸವಾರಿ ಬಳಿಕ ಟಾಂಗಾ ಮಾಲೀಕರಿಗೆ ಉಡುಗೊರೆ ನೀಡಲಾಯಿತು. ಸಚಿವರೊಂದಿಗೆ ಶಾಸಕರಾದ ನಾಗೇಂದ್ರ, ಮೇಯರ್ ಶಿವಕುಮಾರ್, ಮೂಡಾ ಮಾಜಿ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ಸೇರಿದಂತೆ ಹಲವರು ಟಾಂಗಾ ಸವಾರಿ ಮಾಡಿದರು.