ಮೈಸೂರು ದಸರಾ 2022ರ ನಾಡ ಹಬ್ಬದ ವೀಕ್ಷಣೆಗಾಗಿ ವಿದೇಶಿ-ದೇಶಿ ಪ್ರವಾಸಿಗರು/ ಸಾರ್ವಜನಿಕರ ಅನುಕೂಲಕ್ಕಾಗಿ “ಗೋಲ್ಡ್ ಕಾರ್ಡ್” ಸೌಲಭ್ಯವನ್ನು

ಮೈಸೂರು ದಸರಾ 2022ರ ನಾಡ ಹಬ್ಬದ ವೀಕ್ಷಣೆಗಾಗಿ ವಿದೇಶಿ-ದೇಶಿ ಪ್ರವಾಸಿಗರು/ ಸಾರ್ವಜನಿಕರ ಅನುಕೂಲಕ್ಕಾಗಿ "ಗೋಲ್ಡ್ ಕಾರ್ಡ್" ಸೌಲಭ್ಯವನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಇದರಿಂದ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ. " ಗೋಲ್ಡ್ ಕಾರ್ಡ್" ಖರೀದಿಯನ್ನು ಆನ್ಲೈನ್ ಮುಖಾಂತರ ಮಾಡಬಹುದಾಗಿದೆ. ಇದರ ಬೆಲೆ ರೂ. 4,999/- ಮಾಡಲಾಗಿದೆ

ಆನ್ಲೈನ್ : ಗೋಲ್ಡ್ ಕಾರ್ಡ್ ಲಭ್ಯತೆ ಅನುಗುಣವಾಗಿ ಆನ್ಲೈನ್ ಮೂಲಕ ವೆಬ್ ಸೈಟ್ ನಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ಬಾರಿಗೆ ಗರಿಷ್ಟ ಎರಡು “ಗೋಲ್ಡ್ ಕಾರ್ಡ್” ಖರೀದಿಸಬಹುದಾಗಿದೆ. ಒಮ್ಮೆ ಆನ್ಲೈನ್ ಪಾವತಿ ದೃಡೀಕೃರಿಸಿದ ನಂತರ ಪ್ರವಾಸಿಗರು “ಗೋಲ್ಡ್ ಕಾರ್ಡ್” ಅನ್ನು ದಿನಾಂಕ: 29-09-2022 KSTDC (ಪ್ರವಾಸೋದ್ಯಮ ಇಲಾಖೆ ) ಮಯೂರ ಹೋಟೆಲ್ ಹತ್ತಿರ ಮೈಸೂರಿನಲ್ಲಿ ಬೆಳಗ್ಗೆ 11.00 ರಿಂದ ಸಂಜೆ 5.30 ರವರೆಗೆ ಪಡೆದುಕೊಳ್ಳಲ್ಲು ಅವಕಾಶ ಕಲ್ಪಿಸಲಾಗಿದೆ. ಗೋಲ್ಡ್ ಕಾರ್ಡ್ ಪಡೆದುಕೊಳ್ಳುವಾಗ ಪಾವತಿ ನಂತರ ಸ್ವೀಕೃತವಾಗುವ ಇಮೇಲ್ ಪ್ರತಿ ಹಾಗು ಯಾವುದಾದರೂ ಒಂದು ಐ.ಡಿ. ಪ್ರೂಫ್ ಅನ್ನು ಹಾಜರುಪಡಿಸುವುದು ಕಡ್ಡಾಯವಾಗಿರುತ್ತದೆ. ಗೋಲ್ಡ್ ಕಾರ್ಡ್ ವಿಶೇಷತೆಗಳು : 1. ದಸರಾ ಮೆರವಣಿಗೆ – ಜಂಬೂ ಸವಾರಿ ವೀಕ್ಷಣೆಗೆ ಅವಕಾಶ 2. ಪಂಜಿನ ಕವಾಯತು ಬನ್ನಿಮಂಟಪ ವೀಕ್ಷಣೆಗೆ ಅವಕಾಶ 3. ಈ ಕೆಳಕಂಡ ಪ್ರವಾಸಿ ತಾಣಗಳಿಗೆ ಒಮ್ಮೆ ಮಾತ್ರ ಉಚಿತವಾಗಿ ವೀಕ್ಷಣೆಗೆ ಅವಕಾಶ. • ಮೈಸೂರು ಅರಮನೆ • ಶ್ರೀ ಚಾಮರಾಜೇಂದ್ರ ಮೃಗಾಲಯ • ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನ • ಫಲಪುಷ್ಪ ಪ್ರದರ್ಶನ • ದಸರಾ ವಸ್ತು ಪ್ರದರ್ಶನ • ಸೇಂಟ್ ಫಿಲೋಮಿನ ಚರ್ಚ್ • ರೈಲ್ವೆ ಮ್ಯೂಸಿಯಮ್ • ಕೃಷ್ಣರಾಜ ಸಾಗರ ಅಣೆಕಟ್ಟು