ಮೈಸೂರು,ಸೆ.12:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿರುವ ವಿಶ್ವವಿಖ್ಯಾತ

ಮೈಸೂರು, ಸೆ. 12: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿರುವ ವಿಶ್ವವಿಖ್ಯಾತ ದಸರಾ ಮಹೋತ್ಸವದ ಜಂಬೂಸವಾರಿ

ಮೈಸೂರು, ಸೆ. 12: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿರುವ ವಿಶ್ವವಿಖ್ಯಾತ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗಳಿಗೆ ವಿವಿಧ ರೀತಿಯ ತಾಲೀಮುಗಳು ಹಂತಹಂತವಾಗಿ ನಡೆಯುತ್ತಿದ್ದು, ಇಂದು ಫಿರಂಗಿ ಮೂಲಕ ಸಿಡಿಮದ್ದು ಸಿಡಿಸುವ ತಾಲೀಮು ನಡೆಯಿತು. ಗಜಪಡೆಗಳು ತಾಲೀಮಿನಲ್ಲಿ ಯಶಸ್ವಿಯಾಗಿವೆ.

ಅಕ್ಟೋಬರ್ 5ರಂದು ನಡೆಯಲಿರುವ ವಿಶ್ವವಿಖ್ಯಾತ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆ ಮತ್ತು ಅಶ್ವಾರೋಹಿದಳದ ಕುದುರೆಗಳು ಭಾರೀ ಶಬ್ದಗಳಿಗೆ ಬೆಚ್ಚದಂತೆ ಅರಮನೆಯ ವರಾಹ ದ್ವಾರದ ಬಳಿ ಇರುವ ಕೋಟೆ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಮೂರು ಸುತ್ತಿನ ಫಿರಂಗಿ ಮೂಲಕ ಸಿಡಿಮದ್ದು ಸಿಡಿಸುವ ತಾಲೀಮು ನಡೆದಿದ್ದು, ಇದಕ್ಕೆ ತಕ್ಕ ಸಿದ್ಧತೆಯನ್ನು ಮೊದಲೇ ಮಾಡಿಕೊಳ್ಳಲಾಗಿತ್ತು.

ಅರಮನೆಯಲ್ಲಿದ್ದ 11 ಫಿರಂಗಿ ಗಾಡಿಗಳನ್ನು ಹೊರತೆಗೆದು ಅವುಗಳನ್ನು ಸ್ವಚ್ಛಗೊಳಿಸಿದ ಬಳಿಕ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಗಿದ್ದು ಕೋಟೆ ಮಾರಮ್ಮ ದೇವಾಲಯದ ಆವರಣದಲ್ಲಿ ಇಂದು 12ಗಂಟೆಗೆ ಮೂರು ಸುತ್ತಿನ ಕುಶಾಲತೋಪು ಸಿಡಿಸುವ ಮೂಲಕ ಆನೆ ಮತ್ತು ಕುದುರೆಗಳಿಗೆ ಸಿಡಿಮದ್ದಿನ ತಾಲೀಮು ನಡೆಸಲಾಯಿತು. ಮೂರು ಆನೆಗಳು ಕೊಂಚ ಗಲಿಬಿಲಿಯಾಗಿದ್ದು ಬಿಟ್ಟರೆ ಬೇರೆ ಏನೂ ಅನಾಹುತಗಳು ಸಂಭವಿಸಿಲ್ಲ.

ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾತನಾಡಿ ದಸರಾ ಮಹೋತ್ಸವ 2022ರ ಅಂಗವಾಗಿ ಇಂದು ಮೊದಲನೆ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು. ಅಶ್ವ, ಆನೆಗಗಳು ಕುಶಾಲತೋಪಿನಿಂದ ಸಿಡಿಯುವ ಶಬ್ದಕ್ಕೆ ಬೆದರಬಾರದು. ಅವುಗಳಿಗೆ ಅಭ್ಯಾಸವಾಗಬೇಕು ಎನ್ನುವ ದೃಷ್ಟಿಯಲ್ಲಿ ತಾಲೀಮು ನಡೆಸಲಾಗುತ್ತಿದ್ದು, ಇನ್ನು ಎರಡು ತಾಲೀಮು ನಡೆಸುತ್ತೇವೆ. ಕೊನೆಯದಿನ ವಿಜಯ ದಶಮಿಯಂದು ಅಂಬಾರಿಯ ಮೆರವಣಿಗೆಯ ವೇಳೆ ರಾಷ್ಟ್ರಗೀತೆ ನುಡಿಸುವ ವೇಳೆ 21 ಸುತ್ತು ಕುಶಾಲತೋಪು ಸಿಡಿಸಿ ಗೌರವ ಸೂಚಿಸಲಾಗುವುದು. ಒಟ್ಟಾರೆ 43ಕುದುರೆಗಳು ಭಾಗಿಯಾಗಿದ್ದವು. ಮೆರವಣಿಗೆಯ ವೇಳೆ 38 ಸಿಆರ್ ಪಿ ಸಿಬ್ಬಂದಿಗಳುಭಾಗಿಯಾಗಿದ್ದರು. 16ನೇ ತಾರೀಖು ಮತ್ತೊಂದು ತಾಲೀಮು ನಡೆಸಲಾಗುವುದು ಎಂದರು.

ಒಂದು ಕೆ.ಜಿ.ಮುನ್ನೂರು ಗ್ರಾಂ ಬಳಸಿದ್ದು, ಯಾವುದೇ ರೀತಿಯ ಹಾನಿಯಾಗದಂತೆ ಕೇವಲ ಶಬ್ದ ಬರುವಂತೆ ಸಿಡಿಸಲಾಗುವುದು. ಪ್ರತಿವರ್ಷ ನಡೆಸಿಕೊಂಡು ಬಂದ ಆಚರಣೆಗೋಸ್ಕರ ಅದಕ್ಕೆ ಬೇಕಾದಷ್ಟನ್ನು ಮಾತ್ರ ಹಾಕಿದ್ದೇವೆ ಎಂದು ತಿಳಿಸಿದರು.

ಡಿಸಿಎಫ್ ಡಾ.ವಿ.ಕರಿಕಾಳನ್ ಮಾತನಾಡಿ ದಸರಾ ಮಹೋತ್ಸವ 2022ರ ಪ್ರಯುಕ್ತ 14 ಆನೆಗಳಿಗೆ ಕುಶಾಲತೋಪು ತಾಲೀಮು ನಡೆಸಿದ್ದೇವೆ. ಮೂರ್ನಾಲ್ಕು ಆನೆ ಗಾಬರಿಯಾಗಿದ್ದು ಬಿಟ್ಟರೆ ಮತ್ತೆಲ್ಲ ಸರಿಯಾಗಿ ನಿಂತಿವೆ. ಅಂಬಾರಿ ಆನೆ ಮತ್ತು ಕುಮ್ಕಿ ಆನೆ, ನಿಶಾನೆ ಆನೆ ಮುಂದಿರಲಿದೆ. ಆನೆಗಳು ಮುಂದೆ ಹಿಂದೆ ಚಲಿಸಿದ್ದು ಬಿಟ್ಟರೆ ಯಾವುದೇ ಅನಾಹುತ ಸೃಷ್ಟಿಸಿಲ್ಲ. ಶ್ರೀರಾಮ, ಸುಗ್ರೀವ, ಪಾರ್ಥಸಾರಥಿ ಸ್ವಲ್ಪ ಗಲಿಬಿಲಿಯಾದವು. ಲಕ್ಷ್ಮಿ ಹೆದರದೆ ಮುಂದೆ ಬಂದಿದೆ ಎಂದರು.

ಆನೆ ನೋಡಿ ಅಶ್ವ ಹಿಂದೆ ಸರಿದ ಕುರಿತು ಪ್ರತಿಕ್ರಿಯಿಸಿ ತರಬೇತಿ ಇದ್ದರೂ ಅವೆಲ್ಲ ವನ್ಯಮೃಗಗಳು. ಅವುಗಳ ಗುಣ ಅದಕ್ಕಿದ್ದೇ ಇರುತ್ತದೆ ಎಂದು ತಿಳಿಸಿದರು. ಇನ್ನು 16ನೇ ತಾರೀಖು, 23ನೇ ತಾರೀಖು ಮತ್ತೆರಡು ತಾಲೀಮು ನಡೆಯಲಿದೆ. ನಿಶಾನೆ ಆನೆಯಾಗಿ ಅರ್ಜುನ ಹೋಗಲಿದ್ದಾನೆ. ಶ್ರೀರಂಗಪಟ್ಟಣ ದಸರಾಕ್ಕೆ ಐದು ಆನೆ ಕೇಳಿದ್ದಾರೆ. ಮೂರು ಆನೆ ಖಂಡಿತ ಹೋಗತ್ತೆ. ಕಳೆದ ವರ್ಷ ಗೋಪಾಲಸ್ವಾಮಿ ತಿರುಗಿದರೂ ಏನೂ ಅನಾಹುತ ಮಾಡಿಲ್ಲ. ಆನೆ ನಡೆಯುವ ಜಾಗದಲ್ಲಿ ಐದು ಅಡಿಯಾದರೂ ದೂರ ಜನರು ನಿಲ್ಲಬೇಕು. ಆನೆಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುವ ತಾಲೀಮು ವೇಳೆ ವಾಹನಗಳ ಶಬ್ದಕ್ಕೂ ಬೆದರಿರಲಿಲ್ಲ ಎಂದು ತಿಳಿಸಿದರು.