Mysuru Dasara

ದಸರಾ ಕಾರ್ಯಕ್ರಮಗಳು 2021

ನಾಡ ಹಬ್ಬ ಮೈಸೂರು ದಸರಾದ ಬಗ್ಗೆ

Dasara-culture-gallery-552x606-1

ಅಕ್ಟೋಬರ್ ೭ ರಿಂದ ೧೫ ರ ವರೆಗೆ ೨೦೨೧ನೇ ಸಾಲಿನ ವಿಶ್ವವಿಖ್ಯಾತಿ ಮೈಸೂರು ದಸರಾ ಮಹೋತ್ಸವ ನಡೆಯಲಿದೆ. ಈ ವರ್ಷದ ದಸರಾ ಉತ್ಸವಕ್ಕೆ ಅಕ್ಟೋಬರ್ ೭ ರಂದು ಬೆಳಗ್ಗೆ ೮.೧೫ ರಿಂದ ೮.೪೫ ರವರೆಗೆ ಸಲ್ಲುವ ಶುಭ ಮುಹೂರ್ತದಲ್ಲಿ ಚಾಮುಂಡಿಬೆಟ್ಟದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಚಾಲನೆ ನೀಡಲಿದ್ದಾರೆ. ದಸರೆಯ ಮುಖ್ಯ ಆಕರ್ಷಣೆ ಜಂಬೂ ಸವಾರಿ ಅಕ್ಟೋಬರ್ ೧೫ ರಂದು ಜರುಗಲಿದ್ದು, ಅಂದು ಸಂಜೆ ೪.೩೬ ರಿಂದ ೪.೪೪ರವರೆಗೆ ನಂದಿ ಧ್ವಜ ಪೂಜೆ ನೆರವೇರಲಿದೆ. ಬಳಿಕ ಸಂಜೆ ೫ ರಿಂದ ೫.೩೦ ರ ವರೆಗೆ ಜಂಬೂ ಸವಾರಿ ನಡೆಯಲಿದೆ. ಕೊರೊನಾ ಹಿನ್ನೆಲೆ ಕಳೆದ ವರ್ಷದಿಂದ ದಸರಾ ಮಹೋತ್ಸವ ಸರಳವಾಗಿ ಆಚರಿಸಲಾಗ್ತಿದ್ದು, ಈ ವರ್ಷವೂ ಜಂಬೂ ಸವಾರಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲಾ ಅರಮನೆ ಆವರಣದಲ್ಲಿ ಆಚರಿಸಲಾಗುತ್ತಿದೆ.

ನಾಡಹಬ್ಬ ದಸರಾ ಅಂದರೆ ಅಲ್ಲಿ ವೈಭವಕ್ಕೇನು ಕಮ್ಮಿ ಇಲ್ಲ. ಅದು ಸರಳವಾಗಿರಲೀ ಅಥವಾ ಅದ್ಧೂರಿಯಾಗಿರಲಿ ದಸರಾ ಅಂದರೆ ಇಡೀ ನಾಡಿಗೆ ಹರುಷ ತರುವ ಹಬ್ಬ. ೯ ದಿನಗಳ ಕಾಲ ನಡೆಯುವ ಈ ನವರಾತ್ರಿ ಉತ್ಸವದಲ್ಲಿ ಮೈಸೂರು ಸಿಂಗಾರಗೊಳ್ಳುವುದನ್ನು ನೋಡುವುದೇ ಕಣ್ಣುಗಳಿಗೆ ಸಂಭ್ರಮ. ಮನೆಮನೆಗಳಲ್ಲಿ ಬೊಂಬೆ ಕೂರಿಸುವುದು, ದುರ್ಗಾ ಪೂಜೆ, ಆಯುಧ ಪೂಜೆ, ಸರಸ್ವತಿ ಪೂಜೆಗಳನ್ನು ಕೈಗೊಳ್ಳುವುದು ಈ ಹಬ್ಬದ ವಿಶೇಷತೆ..ಮುಂದೆ ಓದಿ

ದಸರಾ ನೇರ ಪ್ರಸಾರ 2021

video
Previous
Next